ಲಲಿತಾಂಬಾ ಚಂದ್ರಶೇಖರ್ ಇವರು ಬಹುಕಾಲ ಹೈದರಾಬಾದಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಆ ಬಳಿಕ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಪ್ರೊ ಲಲಿತಾಂಬ ಚಂದ್ರಶೇಖರ್ ಅವರು ಬರೆದ ಎಂಟು ಶಾಸ್ತ್ರೀಯ ರಚನೆಯ ಸಂಪುಟ ಹೊಂದಿದೆ. ಈ ರಚನೆಯನ್ನು ಹೆಸರುವಾಸಿಯಾದ ಸಂಗೀತಗಾರಾದ ಜಿ.ವಿ. ರಂಗನಾಯಕಮ್ಮಾ ಮತ್ತು ಜಿ.ವಿ. ನೀಲಾ ರವರಿಂದ ಹಾಡಲಾಗಿದೆ. ಮೈಸೂರು ಸಿಸ್ಟರ್ಸ್ ರವರ ನವಗ್ರಹ ಕೀರ್ತಿಗಳು, "ಕೀರ್ತನ ಕುಸುಮಾಂಜಲಿ" ಆರನೆಯ ಸಂಪುಟದ ಸರಣಿಯಲ್ಲಿ ಬರುತ್ತದೆ. == ಕೃತಿಗಳು == === ಕಾದಂಬರಿ === ರೇಖಾ ಮುಕುಂದಚಂದ್ರ ಸರಸ್ವತಿ ಸಂಹಾರವೇ ಪುನರ್ದತ್ತಾ ಸುಕನ್ಯೆಯರು ಸ್ವೀಕಾರ === ಕಥಾಸಂಕಲನ === ವಿಮೋಚನೆ ಬಿದಿ ಹೂಗಳು == ಚಿತ್ರೀಕರಣ == ಮುಕುಂದಚಂದ್ರ ಹಾಗು ಪುನರ್ದತ್ತಾ ಕಾದಂಬರಿಗಳು ಚಲನಚಿತ್ರಗಳಾಗಿವೆ. == ಪುರಸ್ಕಾರ == ೧೯೭೯ರಲ್ಲಿ ಸ್ವೀಕಾರ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವರ್ಷದ ಉತ್ತಮ ಪುಸ್ತಕ ಬಹುಮಾನ ಲಭಿಸಿದೆ. ಅಖಿಲ ಭಾರತ ಮಹಾಭಾರತ ಕತೆಗೆ ಮುಂಬಯಿಯ ವಿದ್ಯಾಭವನದ ಕಥಾಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.